ಢುಂಢಿ ಈಗಾಗ್ಲೇ ಕೋಲಾಹಲ ಎಬ್ಬಿಸಿದ್ದಾನೆ. ಢುಂಢಿಯ ಸೃಷ್ಟಿಕರ್ತ ಪೊಲೀಸರ ಅತಿಥಿಯಾಗಿ ಹೊರಬಂದಿದ್ದಾರೆ. ಯೋಗೇಶ್ ಮಾಸ್ಟರ್ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದ ಪ್ರಕರಣ ದಾಖಲಾಗಿದೆ.
ನಿಜಕ್ಕೂ ಒಂದು ಕೃತಿಯಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಲು ಸಾಧ್ಯವೇ? ಹೊಸದಾಗಿ ಬಂದಿರುವ ಕಾದಂಬರಿಯೊಂದಕ್ಕೆ ನಮ್ಮ ಇದುವರೆಗಿನ ಎಲ್ಲಾ ನಂಬಿಕೆಗಳನ್ನು ತೊಡೆದುಹಾಕುವ ಶಕ್ತಿ ಇರುತ್ತದೆಯೇ? ಅಷ್ಟೊಂದು ದುರ್ಬಲವೇ ನಮ್ಮ ಧಾರ್ಮಿಕ ಭಾವನೆಗಳು?
ಇಷ್ಟಕ್ಕೂ ಪುರಾಣದ ಕೃತಿಯನ್ನು ಸಾಮಾಜಿಕ ನೆಲೆಗಟ್ಟಿನಲ್ಲಿ ನೋಡಿದ ಮೊದಲ ಕಾದಂಬರಿಯೇನಲ್ಲ ಢುಂಢಿ. ಪುರಾಣದ ವೈಭವಗಳ ಬದಲು ಸಾಮಾನ್ಯ ದೃಷ್ಟಿಕೋನದಿಂದ ರಾಮಾಯಣ ಮಹಾಭಾರತಗಳನ್ನು ಹಲವು ಕೃತಿಗಳಲ್ಲಿ ಚಿತ್ರಿಸಲಾಗಿದೆ. ಢುಂಢಿಯಲ್ಲೂ ಇದನ್ನೇ ಮಾಡಲಾಗಿದೆ. ಸಾಮಾಜಿಕ ದೃಷ್ಟಿಕೋನದಿಂದ ದೇವತ್ವಕ್ಕೆ ಏರುವ ವ್ಯಕ್ತಿಯ ವ್ಯಕ್ತಿತ್ವವನ್ನುಪರಿಚಯಿಸುವ ಕೆಲಸ ಈ ಕೃತಿ ಮಾಡಿದೆ. ಢುಂಢಿಯಾಗಿದ್ದವನು ಗುಣೇಶನಾಗಿ, ಗಣೇಶನಾಗಿ, ಗಣಪತಿಯಾಗಿ ಮಹಾಗಣಪತಿಯಾಗುವ ಹಂತಗಳನ್ನು ಕೃತಿಯಲ್ಲಿ ಚಿತ್ರಿಸಲಾಗಿದೆ.
ವಿವಾದಗಳಿಂದಾಗಿ ಢುಂಢಿಯ ಬಗ್ಗೆ ಕುತೂಹಲ ಹೆಚ್ಚಾಗಿದೆ. ಅದರಲ್ಲಿ ಹಾಗೆ ಚಿತ್ರಿಸಲಾಗಿದೆಯಂತೆ. ಗಣಪತಿಯನ್ನು ರೌಡಿಯಂತೆ ಬಿಂಬಿಸಲಾಗಿದೆಯಂತೆ. ಪಾರ್ವತಿಯನ್ನು ಕೆಟ್ಟದಾಗಿ ತೋರಿಸಲಾಗಿದೆಯಂತೆ ಅಂತೆಲ್ಲಾ ಕಾಮೆಂಟ್ ಗಳು ಬರುತ್ತಿವೆ. ಅಂತದ್ದೇನೂ ಕೃತಿಯಲ್ಲಿ ಇಲ್ಲ. ಒಬ್ಬ ಅರಣ್ಯಕನಾಗಿದ್ದ ಢುಂಢಿ ಮುಂದೆ ಪಾರ್ವತಿಯ ಪುತ್ರನಾಗಿ ಗಣಪತಿಯಾಗುತ್ತಾನೆ. ಆರಂಭದಲ್ಲಿ ರುದ್ರ ಪಾರ್ವತಿಯ ಸಂಭೋಗದ ಬಗ್ಗೆ ಸ್ವಲ್ಪ ವಿಸ್ತೃತವಾಗಿ ಯೋಗೇಶ್ ಮಾಸ್ಟರ್ ಬರೆದಿದ್ದಾರೆ. ಇದು ಮುಖ್ಯ ಕಥೆಗೆ ಅವಶ್ಯವಾಗಿದ್ದ ವಿವರಣೆಗಳೇನಲ್ಲ. ಯೋಗೇಶ್ ಮಾಸ್ಟರ್ ಕೆಲವೇ ವಾಕ್ಯಗಳಲ್ಲಿ ಆ ತೀವ್ರತೆಯನ್ನು ಬರೆಯಬಹುದಿತ್ತು. ಅಷ್ಟೊಂದು ಲಂಭಿಸುವುದರಿಂದ ಕಲ್ಪನೆಯನ್ನು ಕಟ್ಟಿಕೊಡುವ ಬದಲು ಅಸಹ್ಯ ಅನ್ನಿಸುವುದೂ ಇದೆ. ಆದರೆ ಮುಂದೆ ಶಿವ ಪಾರ್ವತಿಯರ ಬಗ್ಗೆ ಅಷ್ಟೇ ಪ್ರೌಢವಾಗಿ ಬರೆಯಲಾಗಿದೆ. ಬರಹದ ಮೇಲೆ ಇನ್ನಷ್ಟು ಹಿಡಿತ ಸಾಧಿಸುತ್ತಿದ್ದರೆ ಹೆಚ್ಚು ಸಾಹಿತ್ಯಿಕವಾಗಿ ಕೃತಿ ಹೊರಬರಲು ಸಾಧ್ಯವಿತ್ತು. ಢುಂಢಿಯನ್ನು ಅರಣ್ಯಕನ ಹಿನ್ನೆಲೆಯಿಂದ ಪರಿಗಣಿಸಿದ್ದರಿಂದ ಆತ ಕ್ರೂರಿಯಾಗಿದ್ದ, ಯಾಗಗಳನ್ನು ಧ್ವಂಸ ಮಾಡುತ್ತಿದ್ದ ಅನ್ನುವುದಕ್ಕೆಲ್ಲಾ ಕಾದಂಬರಿಯಲ್ಲಿ ಸಕಾರಣಗಳು ದೊರೆಯುತ್ತವೆ. ಆರ್ಯ ಮತ್ತು ಅನಾರ್ಯರ ನಡುವಿನ ತಿಕ್ಕಾಟದ ಬಗೆಗಿನ ವಿವರಗಳು ಢುಂಢಿಯನ್ನು ಹೆಚ್ಚು ಆಪ್ತನನ್ನಾಗಿಸುತ್ತದೆ.
ಒಂದು ಕಾದಂಬರಿಯಾಗಿ ಮಾತ್ರ ಢುಂಢಿಯನ್ನು ಓದಿದ್ರೆ ಅದರಲ್ಲಿ ಖುಷಿಪಡುವ ಹಲವು ಅಂಶಗಳಿವೆ. ಹಾಗೆಯೇ ಕೃತಿಯನ್ನು ಆಕ್ಷೇಪಿಸಲೂ ಸಾಕಷ್ಟು ಅಂಶಗಳಿವೆ. ಆದರೆ ಎಲ್ಲವನ್ನೂ ಧಾರ್ಮಿಕ ನಂಬಿಕೆಗಳೊಂದಿಗೆ ತಳುಕುಹಾಕಿ ನೋಡುತ್ತಾ ಹೋದ್ರೆ ವಿವಾದ ಮಾತ್ರ ಕಣ್ಣಿಗೆ ಕಾಣುತ್ತದೆ.
ಕೃತಿಯೊಂದರಿಂದ ಒಂದು ಧರ್ಮದ ನಂಬಿಕೆಗಳಿಗೆ ಧಕ್ಕೆಯಾಗುತ್ತದೆ ಅಂತಾದರೆ ಅದೇ ಧರ್ಮ ಸಹಸ್ರಾರು ವರ್ಷಗಳಿಂದ ಸದೃಢವಾಗಿ ಬೆಳೆದು ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಈಗ ಬೊಬ್ಬೆ ಹೊಡೆಯುವವರಿಂದ ಅದನ್ನು ರಕ್ಷಿಸಲೂ ಸಾಧ್ಯವಿಲ್ಲ. ಅದೇನಿದ್ದರೂ ಅನುಸರಣೆಯಲ್ಲಿ ಉಳಿಯುವಂತದ್ದು. ಬೆಳೆಯುವಂತದ್ದು. ಬೆಳಗುವಂತದ್ದು !

2 comments:
ಒಳ್ಳೆಯ ವಿಮರ್ಶೆ ಸರ್
ಶರತ್ ಚಕ್ರವರ್ತಿ
ಧನ್ಯವಾದ ಶರತ್..
Post a Comment