ಸಿನಿಮಾ ನೋಡಲು ಕುಳಿತವನಿಗೆ ಇದ್ದಕ್ಕಿದ್ದಂತೆ ರಷೋಮನ್ ನೆನಪಾಯಿತು. ಒಂದು ಕೊಲೆಯನ್ನು ಬೇರೆ ಬೇರೆ ದೃಷ್ಟಿಕೋನದಲ್ಲಿ ಸೆರೆಹಿಡಿದ ಸಿನಿಮಾ ರಷೋಮನ್. ಅದು ಸಾರ್ವಕಾಲಿಕ ಕ್ಲಾಸಿಕ್ ಸಿನಿಮಾ. ಅಕಿರಾ ಕುರುಸೋವಾನ ಮಾಸ್ಟರ್ ಪೀಸ್. ಒಂದು ಕೊಲೆಯ ಸುತ್ತ ಹೆಣೆದ ಕುತೂಹಲಕರ ಕಥಾಹಂದರ ರಷೋಮನ್.
'ಉಳಿದವರು ಕಂಡಂತೆ' ಸಿನಿಮಾ ನೋಡುತ್ತಾ ಕುಳಿತಿದ್ದಾಗ ನೆನಪಾಗಿದ್ದು ರಷೋಮನ್. ಅದು ಆರಂಭದಲ್ಲಿ ಒಮ್ಮೆ ಮಾತ್ರ. ಕಾರಣ ಇಷ್ಟೇ. ಇಲ್ಲೂ ಒಂದು ಕೊಲೆಯನ್ನು ಉಳಿದವರು ಕಂಡಂತೆ ದಾಖಲಿಸಲಾಗಿದೆ. ಪತ್ರಕರ್ತೆಯಾಗಿ ಕಾಣಿಸಿಕೊಂಡಿರುವ ಶೀತಲ್ ಶೆಟ್ಟಿ ಕೊಲೆಯನ್ನು ಬೇರೆ ಬೇರೆಯವರ ದೃಷ್ಟಿಯಿಂದ ದಾಖಲಿಸುತ್ತಾ ಹೋಗುತ್ತಾರೆ. ಹೀಗಾಗಿ ಇದೂ ಕೂಡ ಒಂದು ಕೊಲೆಯ ಸುತ್ತ ಗಿರಕಿಹೊಡೆಯುವ ಸಿನಿಮಾ. ಆದರೆ ಇಲ್ಲಿ ಒಂದಕ್ಕಿಂತ ಹೆಚ್ಚು ಕೊಲೆ ನಡೆದಿದೆ. ಇದರಿಂದಾಗಿ ಉಳಿದವರು ಯಾವ ಕೊಲೆಯನ್ನು ಕಂಡರು ಅನ್ನೋದು ಸ್ವಲ್ಪ ಗೊಂದಲ ಹುಟ್ಟಿಸುತ್ತೆ.
ಸಿನಿಮಾದ ಪ್ಲಸ್ ಪಾಯಿಂಟ್ ರಕ್ಷಿತ್ ಶೆಟ್ಟಿ. ರಕ್ಷಿತ್ ಶೆಟ್ಟಿ ಕಾಣಿಸಿಕೊಂಡಾಗೆಲ್ಲಾ ನಗು ತೇಲಾಡುತ್ತೆ. ರಿಚ್ಚಿಯಾಗಿ ತಿಕ್ಕಲು ತಿಕ್ಕಲಾಗಿ ಕಾಣಿಸಿಕೊಳ್ಳುವ ರಕ್ಷಿತ್ ಶೆಟ್ಟಿ ಚಂದಗೆ ಅಭಿನಯಿಸಿದ್ದಾರೆ. ಇನ್ನು ಕಿಶೋರ್ ಕೂಡ ಎಂದಿನಂತೆ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರದಲ್ಲಿ ಬರುವ ಪಾತ್ರಗಳೆಲ್ಲವೂ ಸಣ್ಣವೇ. ಆದರೆ ಪ್ರತಿಯೊದು ಪಾತ್ರಕ್ಕೂ ತನ್ನದೇ ಆಳ ಅಗಲವಿದೆ. ಅಂತದ್ದೇ ಒಂದು ಪಾತ್ರ ಪುಟಾಣಿ ಹುಡುಗ ಡೆಮಾಕ್ರಸಿಯದ್ದು.
ಚಿತ್ರದ ಸಂಭಾಷಣೆ ಬಗ್ಗೆ ಹೇಳಲೇಬೇಕು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪರಿಸರದಲ್ಲಿ ನಡೆಯುವ ಕತೆ. ಅದಕ್ಕೆ ತಕ್ಕಂತೆ ಇಲ್ಲಿ ಭಾಷೆ ಬಳಕೆಯಾಗಿದೆ. ತುಳು - ಕನ್ನಡ - ಕುಂದಗನ್ನಡ ಸಂಭಾಷಣೆ ಆ ಪರಿಸರವನ್ನು ಪ್ರತಿಬಿಂಬಿಸುತ್ತೆ. ಸಾಮಾನ್ಯವಾಗಿ ದಕ್ಷಿಣ ಕನ್ನಡ ಭಾಗದ ಕನ್ನಡವನ್ನು ಕಾಶೀನಾಥ್ ಸಿನಿಮಾಗಳಲ್ಲಿ ನೋಡಿದ್ದೇವೆ. ತೀರಾ ನಾಟಕೀಯವಾಗಿ ಕಾಶಿನಾಥ್ ಸಿನಿಮಾಗಳಲ್ಲಿ ದಕ್ಷಿಣ ಕನ್ನಡದ ಕನ್ನಡ ಬಳಕೆಯಾಗಿದೆ. ಉಪೇಂದ್ರರ ಬುದ್ಧಿವಂತ ಸಿನಿಮಾದಲ್ಲೂ ಅಷ್ಟೇ. ಆದರೆ ನಿರ್ದೇಶಕರೂ ಆಗಿರುವ ರಕ್ಷಿತ್ ಶೆಟ್ಟಿ ಅಲ್ಲಿನ ಭಾಷೆಯನ್ನು ಯಥಾವತ್ತಾಗಿ ಸಿನಿಮಾದ ಸಂಭಾಷಣೆಯಲ್ಲಿ ಬಳಸಿದ್ದಾರೆ. ಇದರಲ್ಲಿ ಭಾಷೆ ನಾಟಕೀಯವಾಗಿ ಕೇಳಿಸುವುದಿಲ್ಲ. ಬದಲಿಗೆ ಅವಿಭಜಿತ ದಕ್ಷಿಣ ಕನ್ನಡದ ಮಾತಿನ ಶೈಲಿಯನ್ನು ಅದೇ ರೀತಿಯಾಗಿ ಹಿಡಿದಿಟ್ಟಿದ್ದಾರೆ. ರಕ್ಷಿತ್ ಶೆಟ್ಟಿಯ ಸೂಕ್ಷ್ಮತೆ ಇದರಲ್ಲಿ ಗೆದ್ದಿದೆ.
ಸಿನಿಮಾದ ನಿಧಾನವಾಗಿ ಸಾಗುತ್ತೆ. ಅಲ್ಲೊಮ್ಮೆ ಇಲ್ಲೊಮ್ಮೆ ಕೆಲವೊಂದು ಸೀನ್‌ಗಳು ತೀರಾ ನಾಟಕೀಯ ಅನ್ನಿಸೋದೂ ಇದೆ. ನಿಧಾನ ಗತಿಯಲ್ಲಿ ಸಾಗುವುದರಿಂದ ಕೆಲವೊಮ್ಮೆ ಬೋರ್ ಹೊಡೆಸುತ್ತೆ. ಹಾಗಂತ ಸಿನಿಮಾದಲ್ಲಿ ಮನರಂಜನೆಗೆ - ನಗುವಿಗೆ ಕೊರತೆಯಿಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ಇದೊಂದು ವಿಭಿನ್ನ ಪ್ರಯೋಗ. ಕನ್ನಡ ಸಿನಿಮಾದಲ್ಲಿ ಹೊಸ ಪ್ರಯೋಗ ಮಾಡುವ ನಿರ್ದೇಶಕನಿಗೆ ಗಟ್ಟಿ ಗುಂಡಿಗೆ ಬೇಕು. ಯಾಕಂದರೆ ಹೊಸ ಪ್ರಯೋಗಗಳನ್ನು ಜನ ಹೋಗಲಿ ಸಿನಿಮಾದ ಬಗ್ಗೆ ವಿಮರ್ಶೆ ಬರೆಯುವವರೇ ಮೆಚ್ಚಿಕೊಳ್ಳುವುದು ಕಷ್ಟ. ಈ ಸಿನಿಮಾದ ಬಗ್ಗೆ ಬರೆದ ವಿಮರ್ಶೆಗಳಲ್ಲಿ ಕೆಲವರು ಸಿನಿಮಾ ನೋಡೋದೇ ವ್ಯರ್ಥ ಅಂತೆಲ್ಲಾ ಬರೆದಿದ್ದಾರೆ. ಬರೆಯೋದು ಸುಲಭ. ಆದರೆ ಸಿನಿಮಾ ಮಾಡೋದು ಕಷ್ಟದ ಕೆಲಸ. ನೋಡೋದು ಬಿಡೋದು ಜನರಿಗೆ ಬಿಟ್ಟಿದ್ದು. ಸಿನಿಮಾದ ಇಡೀ ಕತೆಯನ್ನೇ ವಿಮರ್ಷೆಯಲ್ಲಿ ಬರೆದು ಕೊನೆಗೆ ತಮ್ಮದೊಂದು ತೀರ್ಮಾನ ಬರೆಯೋದು ಸುಲಭ. ಆದರೆ ವಿಮರ್ಷಕನ ಕೆಲಸ ಅದಲ್ಲ.

No comments:
Post a Comment