ಒಂದು
ಸಿನಿಮಾ ನೋಡೋದಕ್ಕೆ ಅಷ್ಟೊಂದು
ಸಲ ಹೋಗಿದ್ದು ಇದೇ ಮೊದಲು.
ಕಪಾಲಿ,
ಪಿವಿಆರ್..
ಊಹೂಂ
ಟಿಕೇಟ್ ಸಿಗ್ಲಿಲ್ಲ.
ಮತ್ತೆ
ಮಾರ್ನಿಂಗ್ ಷೋ ಟೈಮ್‌ಗೆ ಕಪಾಲಿಗೆ
ಹೋಗ್ಬೇಕಾಯ್ತು.
ಯಾಕಂದ್ರೆ
ಸಂಡೇ ಎಲ್ಲಾ ಮಲ್ಟಿಪ್ಲೆಕ್ಸ್‌ಲೂ
ಟಿಕೇಟ್ ಸೋಲ್ಡ್ ಔಟ್ ಆಗಿತ್ತು.
ಅಂದಹಾಗೆ
ನೋಡೋಕೆ ಹೋಗಿದ್ದು ರಂಗೀತರಂಗ
ಸಿನೇಮಾಕ್ಕೆ.
ಸಿನಿಮಾ
ರಿಲೀಸ್ ಆದ ವಾರದಲ್ಲೇ ನೋಡ್ಬೇಕು
ಅನ್ನೋವಷ್ಟು ಸಿನಿಮಾ ನೋಡೋ
ಕ್ರೇಜ್ ನಂಗಿಲ್ಲ.
ಸಾಮಾನ್ಯವಾಗಿ
ಎರಡು ಮೂರು ವಾರ ಬಿಟ್ಟು ಸಿನಿಮಾ
ನೋಡೋದು ಅಭ್ಯಾಸ. ಆಗ
ಟಿಕೇಟ್ ಆರಾಮಾಗಿ ಸಿಗುತ್ತೆ
ಅನ್ನೋದು ಇದ್ಕೆ ಕಾರಣ.
ರಂಗೀತರಂಗ
ಸಿನಿಮಾ ವಿಷ್ಯದಲ್ಲೂ ಹಾಗೇ ಮೂರು
ವಾರ ಬಿಟ್ಟು ನೋಡೋಕೆ ಹೋದ್ರೆ
ಟಿಕೇಟ್ ಭರ್ತಿ ಮಾರಾಯ್ರೇ !
ಹೌಸ್
ಫುಲ್. ಅದೂ
ಬಾಹುಬಲಿ ಅನ್ನೋ ತೆಲುಗು ಸಿನಿಮಾ
ಕರ್ನಾಟಕದ ಮೂಲೆ ಮೂಲೆಯಲ್ಲಿ
ಅಬ್ಬರಿಸುತ್ತಿರೋ ಕಾಲದಲ್ಲಿ.
ಆ ಸಿನಿಮಾ
ಬಿಟ್ಟು ನಮ್ ಕನ್ನಡದ ಸಿನಿಮಾ
ನೋಡೋಕೆ ಜನ ಹೀಗೆ ದಂಡು ಕಟ್ಟಿಕೊಂಡು
ಬರೋದನ್ನು ನೋಡೋದಿದ್ಯಲ್ಲಾ.
ಅದು ನಿಜಕ್ಕೂ
ಅದ್ಭುತ. 250 ಕೋಟಿ
ರುಪಾಯಿಯ ಸಿನಿಮಾ ಎಲ್ಲಿ.
ಕನ್ನಡದ
ಸ್ಟಾರ್‌ಗಿರಿಯ ಹೀರೋಗಳಿಲ್ಲದ
ಸಿನಿಮಾ ಎಲ್ಲಿ ! ಆದ್ರೆ
ಕನ್ನಡಿಗರು ಒಳ್ಳೆಯ ಸಿನಿಮಾ
ಬಂದಾಗ ಅಷ್ಟೇ ಪ್ರೀತಿಯಿಂದ
ಒಪ್ಕೊಳ್ತಾರೆ ಅನ್ನೋದಕ್ಕೆ ಬೇರೆ
ಉದಾಹರಣೆ ಬೇಕೆ-
ರಂಗೀತರಂಗಕ್ಕಿಂತ
? ಹ್ಯಾಟ್ಸಪ್
ಅನೂಪ್ ಭಂಡಾರಿ !
ಅನೇಕ
ಗೆಳೆಯರು ಅದಾಗಲೇ ರಂಗೀತರಂಗದ
ಬಗ್ಗೆ ಬರೆದಿದ್ದಾರೆ.
ಕೆಲವೊಬ್ಬರು
ಕೆಲವೊಂದು ಸಣ್ಣಪುಟ್ಟ ಲೋಪದ
ನಡುವೆಯೂ ಒಳ್ಳೆಯ ಸಿನಿಮಾ ಅಂತ
ಹೊಗಳಿದ್ದಾರೆ. ಆದ್ರೆ
ಸಿನಿಮಾ ಎಂಜಾಯ್ ಮಾಡೋಕೆ ಕೂತಾಗ
ಅಂತ ಯಾವ ಸಣ್ಣಪುಟ್ಟ ಲೋಪ ಕೂಡ ಈ
ಸಿನಿಮಾದಲ್ಲಿ ಕಾಣಿಸೋದಿಲ್ಲ.
ಅಷ್ಟೊಂದು
ಚಂದಗಿದೆ ಸ್ಕ್ರೀನ್ ಪ್ಲೇ,
ಡೈಲಾಗ್ಸ್,
ಹಾಡು,
ಕ್ಯಾಮರಾ,
ನಟನೆ.
ಬಹುಷಃ
ನಾನು ಮಲಯಾಳಂ ಸಿನಿಮಾಗಳನ್ನು
ಹೆಚ್ಚು ನೋಡುವುದಕ್ಕೋ ಏನೋ.
ರಂಗೀತರಂಗ
ಸಿನಿಮಾ ಮಲಯಾಳಂ ಸಿನಿಮಾಗಳ
ರೀತಿಯಲ್ಲಿ ನೇಟಿವಿಟಿಯನ್ನು
ಕಟ್ಟುಕೊಡುವಲ್ಲಿ ಯಶಸ್ವಿಯಾಗಿದೆ
ಅಂತ ಅನ್ನಿಸಿತು.
ಅನೂಪ್
ಭಂಡಾರಿ ಒಂದು ಒಳ್ಳೆಯ ಸಿನಿಮಾವನ್ನು
ಕನ್ನಡದಲ್ಲಿ ಮಾಡಿದ್ದಾರೆ.
ನಿರೂಪ್
ಭಂಡಾರಿ ನಟನೆಯಲ್ಲಿ ಗೆದ್ದಿದ್ದಾರೆ.
ಜೊತೆಗೆ
ಆವಂತಿಕಾ ಶೆಟ್ಟಿ ಹಾಗೂ ರಾಧಿಕಾ
ಚಂದನ್ ನಟನೆಗೂ ಫುಲ್ ಮಾರ್ಕ್ಸ್
ಕೊಡ್ಲೇಬೇಕು.
ಇನ್ನೂ
ನೋಡದೇ ಇರೋರು ಒಂದೊಳ್ಳೆ ಸಿನಿಮಾವನ್ನು
ಮಿಸ್ ಮಾಡ್ಕೊಬೇಡಿ.
ಕನ್ನಡದಲ್ಲಿ
ರಿಮೇಕ್‌ಗಳ ಅಬ್ಬರದ ನಡುವೆ,
ಹಳೇ
ಸೀಕ್ವೆನ್ಸ್‌ಗಳ ಭರಾಟೆಯ ನಡುವೆ,
ರಂಗೀತರಂಗ
ರಸದೌತಣ ಬಡಿಸುವ ಚೆಂದನೆಯ ಸಿನಿಮಾ.
ಡೆನ್ನನ
ಡೆನ್ನಾನಾ... ಓ..
ಡೆನ್ನನ
ಡೆನ್ನಾನಾ....
No comments:
Post a Comment