Thursday, December 9, 2010
ಬರೆಯುವ ಖುಷಿಗೆ..
ಮತ್ತೆ ಬರೆಯಬೇಕೆಂಬ ಆಸೆ ಆಗ್ತಿದೆ. ಈ ಬಾರಿ ನಿರಂತರವಾಗಿ ಬರೀಬೇಕೆಂದು ನಿಶ್ಚಯ ಮಾಡಿದ್ದೀನೆ. ಯಾನ ಆರಂಭಿಸಿ ಅರ್ಧಕ್ಕೆ ನಿಲ್ಲಿಸುವುದು ಒಳ್ಳೆಯದಲ್ಲ ಅನ್ನೋದು ನಂಗೂ ಗೊತ್ತು. ಬರೀತೀನಿ.
Sunday, May 31, 2009
ಇನ್ನೆಷ್ಟು ದಿನ ಈ ಖುಷಿ
ಮತ್ತದೇ ಹೊಸ ಭರವಸೆಗಳನ್ನು ಜನ ಕೇಳುವಂತಾಗಿದೆ. ಸರ್ಕಾರ ಒಂದು ವರ್ಷ ಪೂರೈಸಿದ ಸಂತಸವನ್ನು ಯಡಿಯೂರಪ್ಪ ಮತ್ತವರ ತಂಡ ಜೋರಾಗಿ ಆಚರಿಸಿಕೊಂಡಿದೆ. ಅಭಿವೃದ್ಧಿಯ ಮಾತುಗಳನ್ನು ಒಂದು ವರ್ಷ ಮುಗಿದ ಮೇಲೂ ಸಿಎಂ ಹಿಂದಿನಷ್ಟೇ ಹುರುಪಿನಿಂದ ಹೇಳುತ್ತಿರುವುದನ್ನು ಜನ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಿದ್ದಾರೆ. ಆದ್ರೆ ಮಾತು ಮುಗಿಸಿದ ಮೇಲೆ ಯಡಿಯೂರಪ್ಪ ಮತ್ತವರ ತಂಡ ಇನ್ನಾದ್ರು ಕೆಲಸ ಮಾಡಬೇಕು ಅನ್ನೋದು ಮೌನವಾಗಿರುವ ಜನರ ನಿರೀಕ್ಷೆ.
ಒಂದೆಡೆ ಸರ್ಕಾರ ಒಂದು ವರ್ಷ ಮುಗಿಸಿದ ಸಂಭ್ರಮದಲ್ಲಿದ್ರೆ ಇತ್ತ ಬಿಜೆಪಿಯ ಉಚ್ಚಾಟಿತ ನಾಯಕ ಯತ್ನಾಳ್ ಸರ್ಕಾರದ ಭವಿಷ್ಯದ ಬಗ್ಗೆ ಮಾತಾಡಿದ್ದಾರೆ. ಈ ಆರೋಪವನ್ನು ಸುಲಭವಾಗಿ ಉಪೇಕ್ಷಿಸುವಂತಿಲ್ಲ. ಯಾಕಂದ್ರೆ ಸರ್ಕಾರದ ಸಂಭ್ರಮದಲ್ಲಿ ಸಚಿವ ಈಶ್ವರಪ್ಪ ಕೂಡ ಪಾಲ್ಗೊಂಡಿಲ್ಲ. ಗಣಿ ಧಣಿಗಳ ಅಸಂತೃಪ್ತಿ ಕೂಡ ಗುಟ್ಟಾಗಿ ಉಳಿದಿಲ್ಲ.
ರಾಜ್ಯದಲ್ಲಿ ಬಿಜೆಪಿಯ ಖುಷಿ ಇನ್ನೆಷ್ಟು ದಿನ ಅನ್ನೋ ಪ್ರಶ್ನೆಗೆ ಸಧ್ಯಕ್ಕೆ ಉತ್ತರವಿಲ್ಲ... !

Saturday, February 14, 2009
ಯಾನ ಆರಂಭ...
ಹೊಸದರೆಡೆಗೆ ಹುಡುಕಾಡುತ್ತಲೇ ಜೀವನ ಸಾಗಿಸುತ್ತಿರುವಾಗ ಕಣ್ಣಾರೆ ಕಂಡ, ಕೇಳಿದ, ತಿಳಿದ ವಿಚಾರಗಳನ್ನು ಖುಷಿಯಿಂದ ದಾಖಲಿಸುವ ಪುಟ್ಟ ಪ್ರಯತ್ನ ಆರಂಭಿಸುತ್ತಿದ್ದೇನೆ. ಯಾನ ಆರಂಭವಾಗಿದೆ.. ಜೊತೆಯಾಗಿ ನೀವಿರಿ...
Subscribe to:
Posts (Atom)