ಸಿಐಡಿ ಮೂಲಕವೇ ರವಿ ಸಾವಿನ ಕಾರಣಗಳ ಸತ್ಯ ಹೊರತರುತ್ತೇವೆ. ಸಿಬಿಐ ಹಾಗೂ ಸಿಐಡಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇದೂ ತನಿಖಾ ಸಂಸ್ಥೆ. ಅದೂ ತನಿಖಾ ಸಂಸ್ಥೆ. ಇಲ್ಲೂ ಪೊಲೀಸರೇ ತನಿಖೆ ಮಾಡೋದು. ಅಲ್ಲೂ ಪೊಲೀಸರೇ ತನಿಖೆ ಮಾಡೋದು. ಸಿಎಂ ಸಿದ್ದರಾಮಯ್ಯ ಹೀಗೆ ಪುಂಖಾನುಪುಂಖವಾಗಿ ರವಿ ಅಸಹಜ ಸಾವನ್ನು ಸಿಬಿಐಗೆ ಒಪ್ಪಿಸದೇ ಇರೋದಕ್ಕೆ ಕಾರಣಗಳನ್ನು ಹೇಳುತ್ತಾ ಹೋಗಿದ್ದಾರೆ. ರವಿ ಅಪ್ಪ ಅಮ್ಮನ ಮುಂದೆಯೂ ಕುಳಿತು ಇದನ್ನೇ ಸಿದ್ದರಾಮಯ್ಯ ಹೇಳಿದ್ದರು.
ಯಾರೂ ಸಿಐಡಿ ಅಥವಾ ಸಿಬಿಐನಲ್ಲಿ ಪೊಲೀಸರ ಹೊರತಾಗಿ ಆಕಾಶದಿಂದ ಇಳಿದು ಬಂದ ವಿಶೇಷ ಕಾಯಗಳು ತನಿಖೆ ನಡೆಸುತ್ತವೆ ಅಂತ ಹೇಳುತ್ತಿಲ್ಲ. ಪ್ರತಿಯೊಬ್ಬರಿಗೂ ಗೊತ್ತಿದೆ. ಎರಡೂ ಕಡೆಯಲ್ಲಿ ಪುೊಲೀಸರೇ ತನಿಖೆ ನಡೆಸುತ್ತಾರೆ ಅಂತ. ಹಾಗೆಂದು ಸರ್ಕಾರದ ಯಾವುದೋ ಹಗರಣವನ್ನು ಈಗ ಸಿಬಿಐ ತನಿಖೆಗೆ ಒಪ್ಪಿಸಿ ಅಂತ ಜನ ಕೇಳುತ್ತಿಲ್ಲ. ಅರ್ಕಾವತಿ ಹಗರಣವನ್ನು ಸಿಬಿಐಗೆ ಕೊಡಿ ಅಂತ ಹೋರಾಡುತ್ತಿಲ್ಲ. ಇದೇ ಸಿದ್ದರಾಮಯ್ಯನವರು ಹಿಂದೆ ವಿಧಾನಸಭೆಯಲ್ಲಿ ನಿಂತು ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ಒಪ್ಪಿಸಿ ಅಂತ ಅಹೋರಾತ್ರಿ ಧರಣಿ ನಡೆಸಿದ್ದರು. ಆಗಲೂ ಆಗಿನ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿರಲಿಲ್ಲ. ಇಂದು ಅರ್ಕಾವತಿ ಹಗರಣವನ್ನು ಸಿಬಿಐ ತನಿಖೆಗೆ ಕೇಳಿದ್ರೆ ಸಿದ್ದರಾಮಯ್ಯ ಅದನ್ನೂ ಒಪ್ಪಿಸುತ್ತಿಲ್ಲ. ಆದರೆ ಈಗ ಕೇಳುತ್ತಿರೋದು ಒಂದು ಸಾವಿನ ವಿಚಾರವನ್ನು. ರವಿ ಸಾವಿನ ಹಿಂದೆ ಮಾಫಿಯಾಗಳ ಕೈವಾಡ ಇದೆ ಅನ್ನೋದೇ ಎಲ್ಲರಿಗೆ ಕಾಡುತ್ತಿರುವ ಸಂಶಯ. ಅದಕ್ಕಾಗಿ ಯಾರೂ ಈ ಹಂತದಲ್ಲಿ ರಾಜ್ಯ ಸರ್ಕಾರದ ಹಸ್ತಕ್ಷೇಪ ಇರುವ ಸಿಐಡಿ ತನಿಖೆಯಿಂದ ಹೊರಬರುವ ಸತ್ಯವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಸಿದ್ದರಾಮಯ್ಯ ಒಂದು ವೇಳೆ ವಿರೋಧ ಪಕ್ಷದ ನಾಯಕರಾಗಿದ್ದರೆ ಅವರಿಂದಲೂ ಇದೇ ಮಾತು ವ್ಯಕ್ತವಾಗುತ್ತಿತ್ತು. ಇದರಲ್ಲಿ ಯಾರಿಗೂ ಎಳ್ಳಷ್ಟೂ ಅನುಮಾನವಿಲ್ಲ.
ಸಿಐಡಿಯಿಂದಲೇ ಸತ್ಯಾಂಶ ಹೊರಬರುತ್ತೆ ಅನ್ನುತ್ತಿರೋ ಸರ್ಕಾರ, ಯಾವುದೇ ಹಂತದಲ್ಲಿ, ಯಾವುದೇ ಪ್ರಕರಣದಲ್ಲಿ ಇದುವರೆಗೆ ಸಿಐಡಿ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿಯೇ ಇಲ್ಲ ಅಂತ ಆತ್ಮಸಾಕ್ಷಿಯಾಗಿ ಹೇಳಲಿ ನೋಡೋಣ. ಹಾಗೆಂದ ಮಾತ್ರಕ್ಕೆ ಸಿಬಿಐ ಕೂಡ ಸಂಪೂರ್ಣವಾಗಿ ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿದೆ ಅನ್ನೋದನ್ನು ಜನ ಒಪ್ಪಿಕೊಳ್ಳೋದಿಲ್ಲ. ಆದರೆ ಈಗ ನಡೆಯುತ್ತಿರುವ ಹೋಲಿಕೆ ವಿಶ್ವಾಸಾರ್ಹತೆಗೆ ಸಂಬಂಧಿಸಿದ್ದು. ಸಿಐಡಿಗೆ ಹೋಲಿಸಿದ್ರೆ ಸಿಬಿಐ ಹೆಚ್ಚು ವಿಶ್ವಾಸಾರ್ಹ ಅನ್ನೋದು ಜನರ ಭಾವನೆ. ಯಾಕಂದ್ರೆ ಈ ಪ್ರಕರಣದಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಗಳ ಮೇಲೆಯೇ ಅನುಮಾನಗಳು ವಿಧಾನಮಂಡಲದಲ್ಲೇ ವ್ಯಕ್ತವಾಗಿವೆ.
ಇನ್ನು ರಾಜ್ಯದಲ್ಲಿ ಐಎಸ್ಎಸ್ ಅಧಿಕಾರಿ ಸಾವನ್ನಪ್ಪಿದ್ರೆ ಸಿಬಿಐ ತನಿಖೆ ಕೇಳುತ್ತೀರಿ. ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಐಎಎಸ್ ಅಧಿಕಾರಿ ಸಾವನ್ನಪ್ಪಿದ್ರೆ ಯಾವ ತನಿಖೆ ಕೇಳ್ತೀರಿ ಅನ್ನೋ ಪ್ರಶ್ನೆಗಳು ಉದ್ಭವಿಸಿವೆ. ಮುಂದೆ ಯಾವತ್ತೋ ಆಗೋ ಸಾವಿನ ಬಗ್ಗೆ ನಾವ್ಯಾಕೆ ಈಗಲೇ ಉತ್ತರಿಸೋಣ? ಈಗ ರಾಜ್ಯದಲ್ಲಿ ಸಂಭವಿಸಿರುವ ಸಾವಿನ ಹಿನ್ನೆಲೆಯಲ್ಲಿ ಮಾತಾಡೋಣ. ಈಗ ಆಗ್ರಹ ಇರೋದು ಈಗಿನ ಸಾವಿನ ಬಗ್ಗೆ. ಮುಂದೆ ಅಂತದ್ದು ಸಂಭವಿಸದೆ ಇರಲಿ ಅನ್ನೋದು ಸಹೃದಯರ ಆಶಯ.
ರವಿ ಸಾವಿನ ಬಗ್ಗೆ ಇಡೀ ರಾಜ್ಯದ ಜನ ಒಕ್ಕೊರಲಿನಿಂದ ಸಿಬಿಐ ತನಿಖೆಗೆ ಆಗ್ರಹಿಸುತ್ತಿದ್ದಾರೆ ಅಂದ್ರೆ ರಾಜ್ಯ ಸರ್ಕಾರದ ಕಡೆಯಿಂದ ಸಿಗುವ ಉತ್ತರ, ಇದೆಲ್ಲಾ ಜನಾಭಿಪ್ರಾಯವಲ್ಲ. ಜನಾಭಿಪ್ರಾಯ ಏನಿದ್ದರೂ ಚುನಾವಣೆಯಲ್ಲಿ ಮಾತ್ರ. ಮೂರು ನಾಲ್ಕು ಜಿಲ್ಲೆಗಳನ್ನು ಬಿಟ್ಟರೆ ಉಳಿದ ಕಡೆಗಳಲ್ಲಿ ಇಷ್ಟು ತೀವ್ರವಾಗಿ ಸಿಬಿಐ ತನಿಖೆಗೆ ಆಗ್ರಹ ಕೇಳಿಬರುತ್ತಿಲ್ಲ ಅಂತ. ಇದೇ ಜನ ಚುನಾವಣೆ ಸಂದರ್ಭದಲ್ಲಿ ಅವರ ಪಕ್ಷಗಳ ವಿರುದ್ಧ ವ್ಯಕ್ತವಾಗುವ ಚುನಾವಣಾ ಪೂರ್ವ ಸಮೀಕ್ಷೆಯ ಬಗ್ಗೆಯೂ ಇಂತದ್ದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ಅಂತಿಮವಾಗಿ ದೆಹಲಿಯಲ್ಲಾದಂತೆ ಖಾತೆ ತೆರೆಯದ ಸ್ಥಿತಿಗೆ ತಲುಪಿದಾಗಲೇ ವಸ್ತುಸ್ಥಿತಿ, ಜನಾಭಿಪ್ರಾಯ ಅಷ್ಟೇ ಅಲ್ಲ ಜನರ ನಾಡಿಮಿಡಿತವೂ ಇವರಿಗೆ ಅರ್ಥವಾಗುತ್ತೆ. ಆದರೆ ಆಗ ಕಾಲ ಮಿಂಚಿ ಹೋಗಿರುತ್ತೆ ಅನ್ನೋದನ್ನು ಅಧಿಕಾರ ಇವರ ಕೈಲಿರುವವರೆಗೆ ಅರ್ಥಮಾಡಿಸುವುದು ಕಷ್ಟ.
ರಾಜ್ಯ ಸರ್ಕಾರಕ್ಕೆ ಸಿಬಿಐಗೆ ಪ್ರಕರಣವನ್ನು ಹಸ್ತಾಂತರಿಸುವುದರಿಂದ ಎದುರಾಗುವ ಮುಜುಗರ ಸನ್ನಿವೇಶಗಳ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಂತೆ ಕಾಣುತ್ತಿದೆ. ಅದಕ್ಕಾಗಿಯೇ ಸಿಬಿಐ ತನಿಖೆಗೆ ಹಿಂದೇಟು ಹಾಕುತ್ತಿರೋದು ಸ್ಪಷ್ಟ. ಇದಕ್ಕಾಗಿ ರವಿ ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಪದೇ ಪದೇ ನಂಬಿಸುವ ಮಾತು ಕೇಳಿಬರುತ್ತಿದೆ. ಒಂದು ವೇಳೆ ವೈಯಕ್ತಿಕ ಕಾರಣಕ್ಕೇ ರವಿ ಆತ್ಮಹತ್ಯೆ ಮಾಡಿಕೊಂಡಿದ್ದರೆ ಅದೂ ಸಿಬಿಐ ತನಿಖೆಯಿಂದ ಹೊರಬರುತ್ತದಲ್ಲ. ಸರ್ಕಾರಕ್ಕೆ ಅಳುಕೇಕೆ? ಅರ್ಥವಾಗುತ್ತಿಲ್ಲ.

No comments:
Post a Comment