ಅಂತೂ ಇಂತೂ ಸರ್ಕಾರ ಡಿ.ಕೆ.ರವಿ ಸಾವು ಪ್ರಕರಣವನ್ನು ಸಿಬಿಐಗೆ ವಹಿಸಿದೆ. ಸಿಎಂ ಸಿದ್ದರಾಮಯ್ಯ ಇವತ್ತು ವಿಧಾನಸಭೆಯಲ್ಲಿ ಇದನ್ನು ಘೋಷಿಸಿದ್ದಾರೆ. ಸಾರ್ವಜನಿಕರ ಭಾವನೆಗಳಿಗೆ ಬೆಲೆಕೊಟ್ಟು, ಡಿ.ಕೆ. ರವಿ ಹೆತ್ತವರ ಮನವಿಗೆ ಬೆಲೆಕೊಟ್ಟು ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸೋದಾಗಿ ಸಿದ್ದರಾಮಯ್ಯ ಘೋಷಿಸಿದ್ರು.
ಇವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಕೇವಲ ಒಂದು ಸಾಲಿನಲ್ಲಿ ಸಿಬಿಐಗೆ ವಹಿಸಿಕೊಡೋದನ್ನು ಘೋಷಿಸಿಲ್ಲ. ಬದಲಿಗೆ ಪ್ರತಿಪಕ್ಷಗಳಿಗೆ ರಾಜಕೀಯ ಉತ್ತರವನ್ನು ಕೊಟ್ಟು ನಂತರ ಸಿಬಿಐಗೆ ಪ್ರಕರಣವನ್ನು ಕೊಡೋದಾಗಿ ಪ್ರಕಟಿಸಿದ್ರು. ಇದಕ್ಕೂ ಮೊದಲು ಸಿಎಂ ಪ್ರಸ್ತಾಪಿಸಿದ ಎರಡು ವಿಚಾರಗಳು ಬಹುಮುಖ್ಯ. ಅದರಲ್ಲಿ ಒಂದೆನೆಯದು 'ಹಿಂದೆ ಕೆಲವರು ಸಿಬಿಐಅನ್ನು ಕಾಂಗ್ರೆಸ್ ಬಚಾವೋ ಇನ್ಸ್‌ಟಿಟ್ಯೂಷನ್, ಚೋರ್ ಬಚಾವೋ ಇನ್ಸ್‌ಟಿಟ್ಯೂಷನ್ ಅಂತೆಲ್ಲಾ ಕರೆದಿದ್ದಾರೆ. ಆದರೆ ನಾನು ಯಾವತ್ತೂ ಸಿಬಿಐ ಬಗ್ಗೆ ಇಂತಹ ಹೇಳಿಕೆಯನ್ನು ನೀಡಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಎಲ್ಲಾ ಸಂಸ್ಥೆಗಳ ಬಗ್ಗೆ ನನಗೆ ಪೂರ್ಣ ಗೌರರವಿದೆ. ಸಿಬಿಐನಿಂದಲೂ ಸರಿಯಾದ ನಿಟ್ಟಿನಲ್ಲಿ ತನಿಖೆ ನಡೆಯುತ್ತೆ ಅನ್ನೋ ವಿಶ್ವಾಸವಿದೆ.' ಇದು ಸಿಎಂ ಹೇಳಿದ್ದ ಮಾತುಗಳು. ನಿಜ. ಸಿದ್ದರಾಮಯ್ಯ ಅತ್ಯಂತ ಜವಾಬ್ದಾರಿಯುತವಾಗಿ ವಿರೋಧಪಕ್ಷಗಳಿಗೆ ರಾಜಕೀಯ ಉತ್ತರವನ್ನು ನೀಡಿದ್ರು. ಹಿಂದೆ ವಿಧಾನಸಭೆಯಲ್ಲಿ ನಿಂತು ಬಿಜೆಪಿ ನಾಯಕರು ಅಕ್ರಮ ಗಣಿಗಾರಿಕೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನವರು ಒತ್ತಾಯಿಸಿದಾಗ ಸಿಬಿಐ ಅಂದ್ರೆ ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗಗೇಷನ್, ಕಾಂಗ್ರೆಸ್ ಬಚಾವೋ ಇನ್ಸ್‌ಟಿಟ್ಯೂಷನ್ ಅಂತೆಲ್ಲಾ ಜರೆದಿದ್ದರು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇರೋದ್ರಿಂದ ಯಾವುದೇ ಕಾರಣಕ್ಕೂ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸೋದಿಲ್ಲ ಅಂತ ಘಂಟಾಘೋಷವಾಗಿ ಹೇಳಿದ್ದರು. ಇವತ್ತು ಸಿಬಿಐಗೆ ಪ್ರಕರಣವನ್ನು ಕೊಡಬೇಕೆಂದು ಆಗ್ರಹಿಸುತ್ತಿರುವ ಬಿಜೆಪಿಯವರು ಸಿಎಂ ನೀಡಿರುವ ಈ ಹೇಳಿಕೆಗೆ ಯಾವುದೇ ರೀತಿಯಲ್ಲೂ ಸಮರ್ಪಕವಾಗಿ ಪ್ರತ್ಯುತ್ತರ ನೀಡುವ ಸ್ಥೈರ್ಯ ಉಳಿಸಿಕೊಂಡಿಲ್ಲ. ಹಾಗೆಯೇ ಸಿಬಿಐಅನ್ನು ಚೋರ್ ಬಚಾವೋ ಇನ್ಸ್‌ಟಿಟ್ಯೂಷನ್‌ಅಂತ ಹಿಂದೆ ದೇವೇಗೌಡರು ಕರೆದಿದ್ದರು. ಇದೇ ಕಾರಣಕ್ಕಾಗಿ ಜೆಡಿಎಸ್ ಕೂಡ ಈ ವಿಚಾರದಲ್ಲಿ ಸಿದ್ದರಾಮಯ್ಯಗೆ ತಿರುಗೇಟು ನೀಡೋದಿಕ್ಕೆ ಸಾಧ್ಯವಾಗಿಲ್ಲ. ರಾಜಕಾರಣಿಗಳು ಯಾವುದೋ ಸಂದರ್ಭದಲ್ಲಿ ಹೇಳುವ ಮಾತು ಅವರನ್ನೇ ಬೇರೆ ಸಂದರ್ಭದಲ್ಲಿ ಹೇಗೆ ಬಾಯಿ ಮುಚ್ಚಿಸುತ್ತೆ ಅನ್ನೋದಕ್ಕೆ ಇದೊಂದು ಬೆಸ್ಟ್ ಎಕ್ಸಾಂಪಲ್.
ಎರಡನೆಯದು. ಸಿಎಂ ಸಿದ್ದರಾಮಯ್ಯ, ಈ ಪ್ರಕರಣವನ್ನು ಆರಂಭದಲ್ಲೇ ಸಿಬಿಐಗೆ ವಹಿಸುತ್ತಿದ್ದರೆ ನಮ್ಮ ಪೊಲೀಸರ ಆತ್ಮಸ್ಥೈರ್ಯ ಕುಗ್ಗುತ್ತಿತ್ತು ಅಂತೆಲ್ಲಾ ಹೇಳಿದ್ದಾರೆ. ಆದರೆ ಒಂದು ಪ್ರಕರಣವನ್ನು ಸಿಬಿಐಗೆ ವಹಿಸಿದ ತಕ್ಷಣ ನಮ್ಮ ಪೊಲೀಸರು ದಕ್ಷರಲ್ಲ, ಅವರಿಗೆ ತನಿಖೆ ನಡೆಸೋದಿಕ್ಕೆ ಬರೋದಿಲ್ಲ ಅನ್ನುವ ಭಾವನೆಯನ್ನು ಹುಟ್ಟುಹಾಕುತ್ತದೆ ಅನ್ನೋದು ಅಷ್ಟು ಸಮಂಜಸವಲ್ಲ. ಯಾಕಂದ್ರೆ ಜನ ರಾಜ್ಯದ ಪೊಲೀಸರ ದಕ್ಷತೆಯನ್ನು ಪ್ರಶ್ನಿಸಿಲ್ಲ. ಆದ್ರೆ ಪೊಲೀಸರ ಕಾರ್ಯನಿರ್ವಹಣೆಯ ನಡುವೆ ರಾಜಕೀಯ ಹಸ್ತಕ್ಷೇಪದ ಸಾಧ್ಯತೆಯ ಬಗ್ಗೆ ಅನುಮಾನಿಸಿದ್ದರು. ಅದೇ ಕಾರಣಕ್ಕೆ ಸಿಬಿಐಗೆ ಒಪ್ಪಿಸಬೇಕೆಂದು ಪಟ್ಟುಹಿಡಿದಿದ್ದರು. ಹಾಗಂತ ಸಿಬಿಐ ಕೂಡ ಸಂಪೂರ್ಣ ಸರ್ವಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಅದರಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯೋದೇ ಇಲ್ಲ ಅನ್ನೋ ಪೂರ್ಣ ನಂಬಿಕೆ ಇಲ್ಲ. ಹಲವಾರು ಪ್ರಕರಣಗಳಲ್ಲಿ ಸಿಬಿಐನ ಮೇಲೂ ರಾಜಕೀಯ ಹಸ್ತಕ್ಷೇಪ ಆಗಿರುವ ಆರೋಪಗಳು ಕೇಳಿಬಂದಿವೆ. ಅದೇನೇ ಇದ್ದರೂ ಈ ಪ್ರಕರಣದಲ್ಲಿ ಸಿಬಿಐ ತನಿಖೆ ನಡೀಬೇಕು ಅನ್ನೋ ಅಭಿಪ್ರಾಯ ಸೃಷ್ಟಿಯಾಗಿತ್ತು. ಅದನ್ನು ತಡವಾಗಿ ಅರ್ಥೈಸಿಕೊಂಡ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿದೆ.
ಇನ್ನು ಈ ಪ್ರಕರಣದಲ್ಲಿ ರಾಜಕೀಯ ಲಾಭ ನಷ್ಟದ ಚರ್ಚೆ ಇದ್ದೇ ಇದೆ. ಎಷ್ಟೇ ಇಲ್ಲ ಇಲ್ಲ ಅನ್ನೋ ಸ್ಪಷ್ಟೀಕರಣವನ್ನು ಕೊಟ್ಟರೂ ವಿರೋಧ ಪಕ್ಷಗಳು ಇದರಲ್ಲಿ ರಾಜಕೀಯ ಲಾಭವನ್ನು ಪಡೆಯುವ ಕೆಲಸ ನಡೆದೇ ನಡೆಯುತ್ತದೆ. ಹಾಗಂತ ಈಗ ಕಾಂಗ್ರೆಸ್‌ನವರು ಪ್ರತಿಪಕ್ಷಗಳು ಪ್ರಕರಣದಲ್ಲಿ ರಾಜಕೀಯ ಲಾಭ ಪಡೆದುಕೊಳ್ಳುತ್ತಿವೆ ಅಂತ ಟೀಕಿಸುವುದರಲ್ಲಿ ಅರ್ಥವಿಲ್ಲ. ಯಾಕಂದರೆ ಇಲ್ಲಿ ಪ್ರಕರಣವನ್ನು ಸಿಬಿಐಗೆ ಆರಂಭದಲ್ಲೇ ನೀಡಿರುತ್ತಿದ್ದರೆ ಪ್ರತಿಪಕ್ಷಗಳ ರಾಜಕೀಯ ಲಾಭದ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ.
ಅದೇನೇ ಇದ್ದರೂ ಈ ಪ್ರಕರಣದಲ್ಲಿ ಸತ್ಯ ಹೊರಬರಬೇಕಿದೆ. ಸಿಬಿಐ ತನಿಖೆ ಶೀಘ್ರ ಮುಗಿಯಬೇಕು. ಸಿಎಂ ಈಗಾಗ್ಲೇ ಮೂರು ತಿಂಗಳಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಪತ್ರ ಬರೆಯುವ ಸೂಚನೆ ನೀಡಿದ್ದಾರೆ. ಯಾಕಂದ್ರೆ ಈ ಪ್ರಕರಣವನ್ನು ಹೆಚ್ಚು ಕಾಲದವರೆಗೆ ಎಳೆದಷ್ಟೂ ಇದರಲ್ಲಿ ರಾಜಕೀಯ ಹಸ್ತಕ್ಷೇಪಗಳಿಗೆ ಹೆಚ್ಚಿನ ಅವಕಾಶಗಳು ಲಭಿಸುತ್ತವೆ. ಇದು ತಪ್ಪಬೇಕು. ಸತ್ಯ ಹೊರಬರಬೇಕು.

No comments:
Post a Comment